ರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಂಡಿಯೂರಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ. ರೈತರ ಪರ ನಿಲ್ಲಲು ಸರ್ಕಾರ ಮುಂದಾಗಿದ್ದು, ನಾಳೆ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸೋಕೆ ಸಿಎಂ ನಿರ್ಧರಿಸಿದ್ದಾರೆ.
ರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಂಡಿಯೂರಿದ ರಾಜ್ಯ ಸರ್ಕಾರ : ನಾಳಿನ ಸಭೆಯಲ್ಲಿ ಸಮಸ್ಯೆ ಬಗೆಹರಿಯುತ್ತಾ.?ರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಂಡಿಯೂರಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ.
ರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಂಡಿಯೂರಿದ ರಾಜ್ಯ ಸರ್ಕಾರ : ನಾಳಿನ ಸಭೆಯಲ್ಲಿ ಸಮಸ್ಯೆ ಬಗೆಹರಿಯುತ್ತಾ..?ರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಂಡಿಯೂರಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ. ರೈತರ ಪರ ನಿಲ್ಲಲು ಸರ್ಕಾರ ಮುಂದಾಗಿದ್ದು, ನಾಳೆ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸೋಕೆ ಸಿಎಂ ನಿರ್ಧರಿಸಿದ್ದಾರೆ. ಎರಡೂ ಕಡೆಯವರನ್ನ ಮನವೊಲಿಸುವ ಮೂಲಕ ಸಮಸ್ಯೆ ಬಗೆಹರಿಸೋಕೆ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಎಫ್‌ಆರ್‌ಪಿ ದರ ನಿಗದಿಗೆ ಸಂಬಂಧಿಸಿದಂತೆ ರೈತರ ನೆರವಿಗೆ ಬರುವಂತೆ ಪ್ರಧಾನಿಯವರಿಗೂ ಮನವಿ ಮಾಡಿದ್ದಾರೆ.ಹಾರ್ದಿಕ್ ಜೀವನ ಸಂಗಾತಿಯಷ್ಟೇ ಅಲ್ಲ.. ಆತನ ಮಗನಿಗೆ ತಾಯಿಯಾದ ಗೆಳತಿ! ಇಬ್ಬರ ಜೀವನದ ಹೊಣೆಯೊತ್ತ ಸುಂದರಿಯ ಗುಣಕ್ಕೆ ಮನಸೋತ ಫ್ಯಾನ್ಸ್‌ಅಮಿತಾಬ್ ಬಚ್ಚನ್ ಅಲ್ಲ, ನಟಿ ರೇಖಾ ಹುಚ್ಚಿಯಂತೆ ಪ್ರೀತಿಸಿದ್ದು ಈ ವಿವಾಹಿತ ನಟನನ್ನ! ಬಯಸಿದವನ ಮಾತು ಕೇಳಿ ಸುಂದರಿಗಾಗಿತ್ತು ಆಘಾತಕಳೆದ ಎಂಟು ದಿನಗಳಿಂದ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರಿದಿದೆ. ಪ್ರತಿ ಟನ್ ಕಬ್ಬಿಗೆ 3350 ರೂ. ಎಫ್‌ಆರ್‌ಪಿ ದರ ನಿಗದಿ ಮಾಡುವಂತೆ ಆಗ್ರಹಿಸಿ ಬೀದಿಗಿಳಿದಿದ್ದಾರೆ.. ರೈತರ ಪ್ರತಿಭಟನೆಗೆ ಪ್ರತಿಪಕ್ಷಗಳು ಹಾಗೂ ಹಲವು ಸಂಘಟನೆಗಳು ಬೆಂಬಲವನ್ನ ನೀಡಿದ್ದು, ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ರೈತರ ಸಮಸ್ಯೆಯನ್ನ ಸರಿಪಡಿಸದೇ ಹೋದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಅತ್ತ ಸಕ್ಕರೆ ಕಾರ್ಖಾನೆ ಮಾಲಿಕರನ್ನೂ ಮನವೊಲಿಸ ಬೇಕಿದೆ. ಹೀಗಾಗಿ ನಾಳೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆಯನ್ನ ಕರೆದಿದ್ದಾರೆ.ಸಭೆಯಲ್ಲಿ ಮಾಲಿಕರ ಸಮಸ್ಯೆ, ರೈತರಿಗೆ ಸರಿಯಾದ ದರವನ್ನ ಯಾಕೆ ನೀಡ್ತಿಲ್ಲವೆಂದು ಕೇಳಲಿದ್ದಾರೆ. ಮಾಲಿಕರ ಸಮಸ್ಯೆ ಅಭಿಪ್ರಾಯಗಳನ್ನ ಆಲಿಸಿ ಉತ್ತಮ ದರ ನೀಡುವಂತೆ ಸೂಚನೆ ನೀಡಲಿದ್ದಾರೆ. ಇಂದಿನ ಸಂಪುಟ ಸಭೆಯಲ್ಲೂ ಇದರ ಬಗ್ಗೆ ಗಂಭೀರ ಚರ್ಚೆಯನ್ನ ಮಾಡಲಾಗಿತ್ತು. ಹಾಗಾಗಿ ನಾಳೆ ಮನವೊಲಿಸುವ ಪ್ರಯತ್ನ ಸಿಎಂ ಮಾಡಲಿದ್ದಾರೆ.ಇನ್ನು ಬೆಳಗ್ಗೆ ಸಕ್ಕರೆ ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸಲಿರುವ ಸಿಎಂ ತದನಂತರ ಕಬ್ಬು ಬೆಳೆಗಾರರು, ರೈತ ಮುಖಂಡರ ಜೊತೆಗೂ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲೇ ನಡೆಯಲಿರುವ ಸಭೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರಮುಖ ಹೋರಾಟಗಾರರನ್ನೂ ಆಹ್ವಾನಿಸಿದ್ದಾರೆ. ರೈತರಿಗೆ ಆಗ್ತಿರುವ ವಂಚನೆ, ಮೋಸ,ನಿಗದಿತ ಬೆಲೆ ಸೇರಿದಂತೆ ಅವರಿಂದಲೂ ಮಾಹಿತಿ ಪಡೆಯಲಿದ್ದಾರೆ. ಈ ವೇಳೆ ದರ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಹಾಗಾಗಿ ಪ್ರಧಾನಿಯವರಿಗೂ ಬೆಂಬಲ ನಿಗದಿಗೆ ಮನವಿ ಮಾಡ್ತೇನೆ. ಅವಕಾಶ ಕೊಟ್ಟರೆ ನಿಮ್ಮನ್ನೂ ಕರೆದು ಅವರನ್ನ ಭೇಟಿ ಮಾಡಿಸ್ತೇನೆಂದು ಭರವಸೆ ನೀಡಲಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಕೈಯಲ್ಲಿ ಏನು ಪರಿಹಾರ ಮಾಡೋಕೆ ಸಾಧ್ಯವೋ ಅದನ್ನ ಬಗೆಹರಿಸುವ ವಿಶ್ವಾಸ ತುಂಬಲಿದ್ದಾರೆ.. ಈ ಮೂಲಕ ಪ್ರತಿಭಟನೆ ವಾಪಸ್ ಗೆ ಮನವಿ ಮಾಡಲಿದ್ದಾರೆ. ಇನ್ನು ನಾಳೆ ಸಿಎಂ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತ ಮುಖಂಡರ ಜೊತೆ ಸಭೆಯನ್ನೇನೋ ಮಾಡ್ತಾರೆ. ಆದ್ರೆ ರೈತರು ಇಟ್ಟಿರುವ ಪ್ರತಿಟನ್ ಗೆ 3350ರೂ. ದರವನ್ನ ಕೊಡೋಕೆ ಸಕ್ಕರೆ ಕಾರ್ಖಾನೆ ಮಾಲಿಕರು ಒಪ್ತಾರಾ ಅನ್ನೊ ಪ್ರಶ್ನೆಯೂ ಇದೆ. ಯಾಕಂದ್ರೆ ಬಹುತೇಖ ಸಕ್ಕರೆ ಕಾರ್ಖಾನೆ ಮಾಲಿಕರು ರಾಜಕಾರಣಿಗಳೇ. ಬೆಳಗಾವಿಯ ಜಾರಕಿಹೊಳಿ ಫ್ಯಾಮಿಲಿ, ಹೆಬ್ಬಾಳ್ಕರ್, ಸವದಿ, ಕತ್ತಿ, ಹುಕ್ಕೇರಿ ಕುಟುಂಬಗಳು ಕಾರ್ಖಾನೆ ಹೊಂದಿವೆ. ಇದರ ಜೊತೆಗೆ ಬಾಗಲಕೋಟೆಯ ಮುರುಗೇಶ್ ನಿರಾಣಿ, ಶಿವಾನಂದ ಪಾಟೀಲ್, ಎಂಬಿ ಪಾಟೀಲ್, ಬಸನಗೌಡ ಯತ್ನಾಳ್, ದಾವಣಗೆರೆಯ ಶಾಮನೂರು ಕುಟುಂಬಗಳು ಶುಗರ್ ಫ್ಯಾಕ್ಟರಿ ಹೊಂದಿವೆ. ಸಿಎಂ ಸಭೆ ಮಾಡುತ್ತಲೇ ಇವರೆಲ್ಲರೂ ದರ ನಿಡೋಕೆ ಒಪ್ತಾರೋ ಅನ್ನೋದು ಅಷ್ಟು ಸುಲಭವಲ್ಲ. ತಮ್ಮದೇ ಸಮಸ್ಯೆಗಳನ್ನ ಅವರೂ ಹೇಳಬಹುದು. ಇತ್ತ ರೈತರು ಬೇಡಿಕೆ ಈಡೇರುವವರೆಗೆ ಬಿಡುವಂತೆ ಕಾಣ್ತಿಲ್ಲ.. ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಡೋದು ಡೌಟು. ಹೀಗಾಗಿ ನಾಳಿನ ಸಭೆ ಸಿಎಂ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದೆ.ಒಟ್ನಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಸಕ್ಕರೆ ವಿಚಾರದಲ್ಲಿ ಸರ್ಕಾರದ ನೇರ ಪಾತ್ರ ಇಲ್ಲದಿದ್ರೂ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ.ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತ ಮುಖಂಡರ ಸಭೆಯನ್ನ ಸಿಎಂ ಕರೆದಿದ್ದು,ನಾಳಿನ ಸಭೆಯ ಫಲಿತಾಂಶದ ಮೇಲೆ ರೈತರ ಹೋರಾಟ ನಿಂತಿದೆ.ಕೃಷ್ಣಕುಮಾರ್ ಎನ್.ಕೆ. 'ಜೀ ಕನ್ನಡ ನ್ಯೂಸ್' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್, ಲೈಫ್‌ಸ್ಟೈಲ್, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಸಾರಿಗೆ ಸಂಸ್ಥೆ ನೇಮಕಾತಿ ಪ್ರಕ್ರಿಯೆ ವಿರುದ್ಧ ಮತ್ತೇ ಹೋರಾಟ: ಕುಟುಂಬ ಸಮೇತ ಬೀದಿಗಿಳಿದ ಅಭ್ಯರ್ಥಿಗಳುGold priceಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆ : ಪಿಂಚಣಿದಾರರಿಗೆ ದೊಡ್ಡ ಪರಿಹಾರ ನೀಡಿ ಆದೇಶ
Farmers Protest Belagavi Farmers Protest Farmers Protest In Belagavi DK Shivakumar Cm Siddaramaiah Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
